ಇಂಜಿನಿಯರಿಂಗ್ !! ಅಂದೊಂದಿತ್ತು ಕಾಲ ಹತ್ತು ವರ್ಷಗಳ ಹಿಂದೆ, ಇಂಜಿನಿಯರ್ ಎಂದರೆ ಅದೆಸ್ಟು ಗೌರವ; ಸಾರ್ವಜನಿಕರಿಗೆ ಇಂಜಿನಿಯರ್ ಎಂದರೆ ನೆನೆಪಾಗುತಿದ್ದದು ನಾಲ್ಕು ಮತ್ತು ಐದಂಕಿ ಸಂಬಳ. ಅದೆಸ್ಟೊ ವಧುಗಳು ಇಂಜಿನಿಯರ್ ವರನ್ನನ್ನೇ ಮಧುವೆ ಹಾಗುತ್ತೇನೆಂದು ಹಠಹಿಡಿದಿದ್ದು ಇದೆ. ಅದೇ ಇಂದು ಮನೆಗೆ ಒಬ್ಬ ಇಂಜಿನಿಯರ್ ಹುಟ್ಟಿಕೊಂಡಿದ್ದಾರೆ. ಅದ್ರಲ್ಲಿ ೯೦% ನಿರುದ್ಯೋಗಿಗಳು!!!
ಇಂದಿನ ನಮ್ಮ ಯುವಜನತೆಯ ಪರಿಸ್ಹಿತಿಗೆ ಯಾರನ್ನು ಕಾರಣರನ್ನಾಗಿಸಬೇಕು ತಿಳಿಯುತ್ತಿಲ್ಲ. ದುಡ್ಡಿನ ಆಸೆಗೊ ಇಲ್ಲ ಮಕ್ಕಳ ಜೀವನ ಸುಖಮಯವಾಗಿರಲಿ ಎಂಬ ಕಾಳಜಿಗೊ ನಮ್ಮ ಪೋಷಕರು ಹಿಂಡು ಹಿಂಡಾಗಿ ತಮ್ಮ ತಮ್ಮ ಮಕ್ಕಳನ್ನು ಇಂಜಿನಿಯರಿಂಗ್ ಎಂಬ ತಾಂತ್ರಿಕ ವೃತ್ತಿಪರ ಪದವಿಗಳಿಗೆ ಸೇರಿಸಿದ್ದೋ ಸೇರಿಸಿದ್ದು. ಇವತ್ತು ೧.೫ ಮಿಲ್ಲಿಅನ್ ಅಂದರೆ ೧೫ ಲಕ್ಷ ಇಂಜಿನಿಯರ್ ಗಳು ಪ್ರತೀ ವರ್ಷ ತೇರ್ಗಡೆಹೊಂದಿ ಉದ್ಯೋಗಹರಸಿ ಬರುತ್ತಿದ್ದಾರೆ, ಸಾರ್ವಜನಿಕರ ಮನದಾಳದ ಬಯಕೆಯನ್ನು ಸೊಕ್ಷ್ಮವಾಗಿ ಗಮನಿಸಿದ ಎಸ್ಟೊಮಂದಿ ವ್ಯವಹಾರಸ್ತರು ಒಂದರ ಹಿಂದೆ ಒಂದು ಯೆಂಬಂತೆ ಸರಿ ಸುಮಾರು ೪೦೦೦ ಇಂಜಿನಿಯರ್ ಕಾಲೇಜುಗಳನ್ನು ತೆರದೇ ಬಿಟ್ಟರು !! ೨೦೦೫ ರ"ದಿ ನೊಲೆಡ್ಗ್ ಕಮಿಸ್ಸನ್ ಆಫ಼್ ಇಂಡಿಯ" ವರದಿಯ ಪ್ರಕಾರ ೨೦೧೫ ರ ವೇಳೆಗೆ ೧೫೦೦ ಯೂನಿವರ್ಸಿಟಿಗಳು ನಮ್ಮ ಯುವಜನತೆಯ ವಿದ್ಯಾಬ್ಯಾನಕ್ಕೆ ಬೇಕೆಂದು ಹೇಳಿದ್ದು ಇಂದು ೨೦೧೬ ರಲ್ಲಿ ೪೦೦೦ ಇಂಜಿನಿಯರ್ ಕಾಲೇಜುಗಳು !!!
ಪ್ರತೀ ವರ್ಷ ೧೫,೦೦,೦೦೦ ಇಂಜಿನಿಯರ್ ಗಳು ಹೊರಗಡೆ ಬರುತ್ತಿದ್ದಾರೆ. ಒಮ್ಮೆ ಯೋಚಿಸಿ ಡಿಪ್ಲೋಮ, ಐಟಿಐ ಮಾಡಿದವರನ್ನು ಇವರ ಜೊತೆ ಸೇರಿಸಿದರೆ???!! ೨೦೧೨ ರ "ನ್ಯಾಷನಲ್ ಎಂಪ್ಲೋಯ್ ಮೆಂಟ್ ವರದಿಯ ಪ್ರಕಾರ ಶೇಕಡ ೮೩ ಇಂಜಿನಿಯರಿಂಗ್ ವೃತ್ತಿಪರ ಪದವೀದರರು ಅಯೋಗ್ಯರೆಂದು. ಇದಕ್ಕೆ ದೂರುವುದು ಯಾರನ್ನು ?? ಖಂಡಿತವಾಗಿಯು ಶೈಕ್ಷಣಿಕ ಶಿಕ್ಷಣಾಧಿಕಾರಿಗಳನ್ನು. ನೆನಪಿಸಿಕೊಳ್ಲಿ ೨ನೇ ಪದವಿ ಪೂರ್ವ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಅಯೋಗ್ಯರಿಗೂ ಇಂಜಿನಿಯರಿಂಗ್ ಮಾಡುವ ಅವಕಾಶ ಕೊಟ್ಟಿದ್ದಾದರು ಯಾರು ??? ಇವರೇ ಅಲ್ಲವೇ ?? ನಮ್ಮ ದೇಶ ಉತ್ಪಾದಿಸುತ್ತಿರುವ ಇಂಜಿನಿಯರ್ ಗಳ ಸಂಖ್ಯೆ ಚೀನ ಮತ್ತು ಅಮೇರಿಕಗಳಿಂದ ಉತ್ಪಾದನೆಯಾಗುತ್ತಿರುವವರಿಗಿಂತ ಹೆಚ್ಚು. ನೂಲಿನಂತೆ ಸೀರೆ ಎಂಬಂತೆ ಇವರಿಗೆ ಪಾಠ ಮಾಡುತ್ತಿರುವುದು ಯಾರು ಗೊತ್ತೇ?? ಅದೋ ನೋಡಿ ಅತೀ ಕಡಿಮೆ ಅಂಕದಲ್ಲಿ ತೇರ್ಗಡೆಯಾಗಿ ಕೆಲಸವಿಲ್ಲದೆ ಇದ್ದರಲ್ಲ ಅವರೇ. ಇಸ್ಟೊಂದು ಕಾಲೇಜುಗಳಿಗೆ ಪರವಾನಿಗೆ ನೀಡುವುದಕ್ಕೆ ಯಾವುದಾದರು ಮಾನದಂಡ ಇರಬೇಕಲ್ಲವೇ ?? ಎಲ್ಲವನ್ನೂ ಗಾಳಿಗೆ ತೂರಿಬಿಡಲು ಯಾರು ಕಾರಣ ??

ಚಿಂತಿಸುತ್ತಾ ಹೊದರೆ ಬೇರೆಯವರ ಮೇಲೆ ಬೆಟ್ಟು ತೋರಿಸುತ್ತಾರೆ ಹೊರೆತು ಯಾರೊಬ್ಬರು ಹೊಣೆ ಹೊರಲು ಸಿದ್ಧರಿಲ್ಲ. ಈ ಪರಿಸ್ತಿತಿಯಲ್ಲಿ ಏನುಮಾಡಬೆಕೆಂದು ಯೋಚಿಸಿದರೆ, ಇಂದಿನಿಂದಾದರು ಯೋಗ್ಯರಿಗಸ್ಟೇ ಇಂಜಿನಿಯರಿಂಗ್ ವೃತ್ತಿಪರ ಸೀಟುಗಳನ್ನು ನೀಡಬೇಕು. ಮತ್ತ್ಯಾವುದೇ ಕಾಲೇಜಿಗೆ ಪರವಾನಿಗೆ ನೀಡಬಾರದು. ಯಾವ ಯಾವ ಕಾಲೇಜುಗಳಲ್ಲಿ ಸೂಚಿಸಿರುವ ನಿಯಮಗಳನ್ನು ಗಾಳಿಗೆ ತೂರಿದ್ದರೋ ಅಂತವರ ಪರವಾನಿಗೆ ರದ್ದು ಮಾದಬೇಕು. ಕೊನೆಯದಾಗಿ ಸಾರ್ವಜನಿಕರು ಮತ್ತು ಪೊಷಕರು ಸ್ವಲ್ಪ ಯೋಚಿಸಿ ಮಕ್ಕಳ ಭವಿಷ್ಯ ನಿರ್ಧರಿಸುವುದು ಸೂಕ್ತವಲ್ಲವೇ??

| List of Institutions according to States of India |

No comments:
Post a Comment